ಬಂದು ಕೂತೈತೆ
ಮನೆಮಂದಿ ನಡುವೆ
ಮಾಟದಾ ಪೆಟ್ಟಿಗೆ,
ನೋಡಿದಾಯಿತು ದಿನನಿತ್ಯ
ಅವರಿವರ ಹೊಡೆದಾಟ
ಮರುಗಿದಾಯಿತು ನೋಡಿ
ಅವರಿವರ ಸಂಕಷ್ಟ
ಬೇಕೆ ಅತ್ಯಾಚಾರ?
ಹೊಲಸು ರಾಜಕೀಯ?
ತುಂಬಿತೆಲ್ಲವು ತುಂಬುಮನೆಯಲ್ಲಿ
ಮತ್ತೀಗ ನೋಡಿ
ಮಾಟದಾ ಪರಿಣಾಮ
ಇದ್ದ ಮುದ್ದಿನ ಮಕ್ಕಳೊಳು
ಕಾದಾಟ, ಬಡಿದಾಟ
ಒಂದು ಕತ್ತಿಯಾಗೆ
ಇನ್ನೊಂದು ದೊಣ್ಣೆ
ಹೆತ್ತಮ್ಮನ ಕಣ್ಣಲ್ಲಿ
ಸುರಿವ ಧಾರಾವಾಹಿ..
ಅಂದ ಹಾಗೆ.. ಈ ಕವನ ಬರೆದದ್ದು ನನ್ನ ತಾಯಿ.
ಪ್ರಕವಿ(Prakavi)
©2009 Pradeep Hegde. All rights reserved.
ಮಾಯಾ ಪೆಟ್ಟಿಗೆ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ ನಿಮ್ಮ ತಾಯಿಯವರು…
LikeLike
ಧನ್ಯವಾದಗಳು! ಕವನ ನಿಮಗಿಷ್ಟವಾದದ್ದು ಸಂತೋಷ 🙂
LikeLike