ಕಂಗ್ಲೀಷ್ ನಾಡು.. !

ಕಂಗ್ಲೀಷ್ ನಾಡು

ಕಂಗ್ಲೀಷ್ ನಾಡು

ಕನ್ನಡವೆಲ್ಲಿ.. ಕನ್ನಡವೆಲ್ಲಿ..
ಕನ್ನಡ ನಾಡಲಿ ಕನ್ನಡವೆಲ್ಲಿ?!


ಅಪ್ಪ-ಅಮ್ಮ ಇರರಿಲ್ಲಿ
ಅಣ್ಣ-ಅಕ್ಕ ಕಾಣರಿಲ್ಲಿ
ತಮ್ಮ-ತಂಗಿಯರಿಲ್ಲೆಲ್ಲಿ?
ನಮ್ಮ ಕರುನಾಡಲ್ಲಿ…


ತಂದೆ, ತಾಯಿಯ ಕೊಂದು ಮುಗಿಸಿ
ಮಮ್ಮಿ, ಡ್ಯಾಡಿಯು ಮೆರೆಯುತಿಹರು..
ಸೋದರ, ಸೋದರಿಯರನ್ನು ಬಂಧಿಸಿ
ಬ್ರದರ್ರು, ಸಿಸ್ಟರ್ರು ಬೀಗುತಿಹರು…


ಅನ್ನ, ಪಲ್ಯಗಳಿಲ್ಲಿ ಸಿಗವು
ಊಟ, ತಿಂಡಿಯಿಲ್ಲೆಲ್ಲೂ ಸಿಗವು..
ರೈಸು, ಸಬ್ಜಿಯೇ ಬಾಯಿಗಿಲ್ಲಿ
ಮೀಲ್ಸು, ಟಿಫನ್ನೇ ಹೊಟ್ಟೆಗಿಲ್ಲಿ…


ಗಂಧದ ಗುಡಿಯಲಿ ಗಂಧವಿಲ್ಲ
ಸ್ಯಾಂಡಲ್ ವುಡ್ಡಿನ ಸ್ಮೆಲ್ಲೇ ಎಲ್ಲ..
ಮಗ, ಮಗಳು ಹುಟ್ಟದ ನಾಡು
ಸನ್ನು, ಡಾಟರುಗಳೇ ನವ ಜನಾಂಗ ನೋಡು…


ತನು ಮನವೆಲ್ಲಾ ಇಂಗ್ಲೀಷು,
ನಡೆ ನುಡಿಯೆಲ್ಲಾ ಕಂಗ್ಲೀಷು..
ಕನ್ನಡ ತಪ್ಪಿಯೂ ನುಡಿದರೆ ಜೋಕೆ!
ಅನ್ನಿಸಿಕೊಳ್ಳುವೆ ’ಫೂಲೀಷು” !

ಪ್ರಕವಿ(Prakavi)

©2008 Pradeep Hegde. All rights reserved.

ಚಿತ್ರಕೃಪೆ: Emblem-conflicting.svg By The people from the Tango! project (The Tango! Desktop Project) [Public domain or Public domain], via Wikimedia Commons

About ಪ್ರಕವಿ

ಕವನ ಬರೆದಾಗ ಪ್ರಕವಿ, ಲೇಖನ ಬರೆದಾಗ ಪ್ರಲೇಖ! ಚಿತ್ರ ತೆಗೆಯುವಾಗ ಪ್ರಚಿತ್ರ! ಹಾಗೂ, ನಿಮ್ಮನ್ನು ನಗಿಸುವಾಗ ಪ್ರಹಾಸ! Hi. I am Pradeep. Do not ask me who am I. For, I am just a mere human who likes to create, to capture the beauty and essence of nature, to savour and share the merits of humour, to write on what seems worthwhile, or to exercise my poetic license.

Posted on December 5, 2008, in ಕನ್ನಡ, ಕವನ, ಕ್ರಾಂತಿ, Kannada Poems, kavana and tagged , , , , , , , , , , , , , , , . Bookmark the permalink. 4 Comments.

  1. ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

    Like

  2. gud… modalne postu eegin postu eldu nodappa, ninge gottaagutte.

    Like

  3. ಪ್ರಕವಿಗಳೇ,

    ಬೆಂಗಳೂರಿನಲ್ಲಿ ಈಗ ನಡೆದಿರುವುದೇ ಅದು ಏನಂತೀರೀ…..

    ಆಹಾ! ನನ್ನ ಬ್ಲಾಗಿನಲ್ಲಿ ಹೊಸ ಲೇಖನವನ್ನು ಹಾಕಿದ್ದೇನೆ. ಬಿಡುವು ಮಾಡಿಕೊಂಡು ಬನ್ನಿ.

    Like

  4. ಬೆಂಗಳೂರಿನಲ್ಲಿ ಮಾತ್ರ ಅಲ್ಲ ಶಿವು ಅವರೇ, ಎಲ್ಲೆಡೆ ಹೀಗೆ ನಡೀತಿದೆ. ಅದಕ್ಕೇ ಮೇಲೆ “ಕನ್ನಡದ ಬೆಳವಣಿಗೆ” ಎಂದು ಲೇಖನ ಬರೆದು, ಭಾಷಾ ಕಲಬೆರಕೆ ಅಳೆಯೋ ಸೂತ್ರ ಕೂಡಾ ತಯಾರು ಮಾಡಿ ಕೊಟ್ಟಿದ್ದೆ. ಯಾರೂ ಗಮನಿಸಿದಂತಿಲ್ಲ…

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: