ಬೂದಿ ಬಯಲ ಕಲ್ಲು

ಒಡೆದ ಹೃದಯದ ತಾಣದಲಿ
ಆಗಿದೆ ಕಲ್ಲಿನ ಸ್ಥಾಪನೆ
ಘಾಸಿಗೊಂಡ ಮನಕಾಗಲು
ಕಾಲದ ಸಾಂತ್ವನದ ಲೇಪನೆ…

ಇನ್ನೇನು ಚಿಂದಿಯಾಗಲಿರುವ
ಸವೆದ ಚಿತ್ರದೊಳು ಮಾಸಿದ
ಬಣ್ಣಗಳ ನಡುವೆ ಇಂದು ಕಾಣದ
ಮೊಗ ಹೇಗಿತ್ತೋ ನೆನಪಿಲ್ಲ…

ಗಾಯ ಹೋಗಲು ವಾಸಿಯಾಗಿ
ಬಿಟ್ಟು ಹೋಯಿತು ಕಲೆಯೊಂದ,
ಹೊತ್ತು ಉರಿದ ಮನ ವನವು ಈಗ
ಕೆಂಡವಾರಿದ ಬೂದಿ ಬಯಲು…

ಪ್ರಕವಿ(Prakavi)
©2009 Pradeep Hegde. All rights reserved.

8 thoughts on “ಬೂದಿ ಬಯಲ ಕಲ್ಲು

Leave a reply to ಪ್ರದೀಪ್ ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.