ಕಂಗ್ಲೀಷೆಂದರೆ,
ಹಂಪಿಯ ಅವಶೇಷಗಳ ನಡು ನಡುವೆ
ನಿಂತ ವ್ಯವಹಾರ ಮಳಿಗೆಗಳು..
ಪಟ್ಟದಕಲ್ಲ ರುಂಡ ತುಂಡಾದ
ಧ್ವಂಸ ವಿಗ್ರಹಗಳು..
ದೇಹಕೆ ಜೀವ ನೀಡುವ ಶ್ರೇಷ್ಠ
ನೈವೇದ್ಯದೊಳ ಕಲ್ಲ ಚೂರುಗಳು..
ಕಂಗ್ಲೀಷೆಂದರೆ,
ಚಹದಲ್ಲಿ ತೇಲಾಡುವ ನೋಣ,
ಅಮೃತ ಜಲದೋಳು ರೋಗದ ಕಣ,
ದುರ್ಬಳಕೆಯಿಂದ ಹರಿದ ಹಣ,
ನಡೆದಾಡುವ ಜೀವಂತ ಹೆಣ,
ಬೆಲ್ಲ ಕಹಿಯಾದ ಕ್ಷಣ..
ಕಂಗ್ಲೀಷಿಗರಿಗೆಲ್ಲಿ ಕನ್ನಡದ ಋಣ?
ಕಿರುಚಿ ಕೂಗುವುದು ಕತ್ತೆಯು
ತಾನು ಕೋಗಿಲೆಯೆಂದು..
ಬೊಗಳಿ ಬೀಗುವರು ಕಂಗ್ಲೀಷರು
ತಾವು ಕನ್ನಡಿಗರೆಂದು…
ಪ್ರಕವಿ(Prakavi)
©2010 Pradeep Hegde. All rights reserved.
Image Attributes: http://commons.wikimedia.org/wiki/File:Donkey-06.jpg
http://commons.wikimedia.org/wiki/File:Asian_koel.jpg
ಪ್ರಕವಿ,
ಕಂಗೀಷನ್ನು ಮತ್ತು ಅದನ್ನು ಬಳಸುವವರನ್ನು ಚೆನ್ನಾಗಿ ಕವನದಲ್ಲಿ ಜಾಡಿಸಿದ್ದೀರಿ.
LikeLike
ಧನ್ಯವಾದಗಳು! ಕವನ ನಿಮಗಿಷ್ಟವಾದದ್ದು ಸಂತೋಷ
LikeLike
ಚ೦ದದ ಕವಿತೆ..
LikeLike
ಧನ್ಯವಾದಗಳು! ಕವನ ನಿಮಗಿಷ್ಟವಾದದ್ದು ಸಂತೋಷ
LikeLike
ಚೆನ್ನಾಗಿದೆ. ವಿಕ ದ ಲವಲವಿಕೆ ನೆನಪಾಗುತ್ತದೆ 🙂
LikeLike
🙂
LikeLike
Good one !!!
LikeLike
🙂
LikeLike