ಬ್ಲಾಗ್ ಸಂಗ್ರಹಗಳು

ಸಾಧ್ಯವೇ ಇದು?!

ಸಾಧ್ಯವೇ ಇದು?!

ಸಾಧ್ಯವೇ ಇದು?!


ಮನವೊಂದು ಬಿಕ್ಕಳಿಕೆಯ
ಬತ್ತಳಿಕೆ ಮಾತ್ರವೇ? ಮೀರಿ
ಲೋಕದ ಎಲ್ಲೆಯ ಹಾರಾಡುವ
ಮನಕೆ ಸಾಧ್ಯವೇ ಸೆರೆಯಾಗಲು
ಮೌನದ ಪುಟ್ಟ ಪಂಜರದಲಿ..
  ಮೀರಿಸಿ ಸಪ್ತ ಸಾಗರದ ಜಲಚರಗಳ
  ಈಜಾಡುವ ಮನಕೆ ಸಾಧ್ಯವೇ
  ಮುಳುಗಲು ಕಣ್ಣೀರ ಕಡಲಲಿ..


ಹೃದಯವೇನು ಪೆಡಸು ಪ್ರತಿಮೆಯೇ
ಭಂಗುರ ಪುತ್ಥಳಿಯೇ? ವಿರಮಿಸಲು
ಜಗವೆಲ್ಲ, ನಿದ್ರಿಸಲು ಲೋಕವೆಲ್ಲ, ನಿದ್ರಿಸದೇ
ವಿರಮಿಸದೇ, ಇರುಳು ಹಗಲೆನದೇ
ಢವಢವಿಸುವ ಹೃದಯಕೆ ಸೋಲುಂಟೇ..
  ಕಾಯಕವ ಕೈಲಾಸವೆಂದು ಕ್ಷಣವೂ
  ಬಿಡುವಿರದೇ ದುಡಿವ ಕಾರ್ಯನಿಷ್ಠನಿಗೆ
  ಸಾಧ್ಯವೇ ಭಾವಬಂಧಿತನಾಗಲು..

ಪ್ರಕವಿ(Prakavi)
©2009 Pradeep Hegde. All rights reserved.

%d bloggers like this: