ದ್ವಿಪದಿಗಳು :: ಕೈ ಕೆಂಪಾದರೆ ಬಾಯಿ ನೆತ್ತರು

ಕೈ ಕೆಂಪಾದರೆ ಬಾಯಿ ನೆತ್ತರು

ಜಾತಿ-ಧರ್ಮವೆಂದು ನೆತ್ತರೇಕೆ ಸುರಿಸುವಿಯಯ್ಯಾ
ಮೈ ಬಾಗಿಸಿ ಬೆವರು ಸುರಿಸಯ್ಯಾ..

ನಾಳೆ (ಗಂಡನ ನಾಳೆ)

ನಾಳೆಯೆಂಬುದು ಕರ್ಣಾನಂದಕರ ನನಗೆ
ಆದರೆ, ಕರ್ಣಕಠೋರ ಮಡದಿಗೆ!

ನಾಳೆ (ಹುಡುಗನ ನಾಳೆ)

ನಾಳೆಯೆಂಬುದು ಕರ್ಣಾನಂದಕರ ನನಗೆ
ಆದರೆ, ಕರ್ಣಕಠೋರ ಅಮ್ಮನಿಗೆ!

ನೆನಪುಗಳು.. (೨೦೦೩)

ನೆನಪುಗಳು.. ಸವಿ ನೆನಪುಗಳು ಬಂದಾಗ ಬೇಸರವಾಗುವುದು.. ಆ ದಿನಗಳು ಇನ್ನಿಲ್ಲವೆಂದು! ನೆನಪುಗಳು.. ಕಹಿ ನೆನಪುಗಳು ಬಂದಾಗ ಸಂತಸವಾಗುವುದು.. ಆ ದಿನಗಳು ಇನ್ನಿಲ್ಲವೆಂದು! (ಈ ಪದ್ಯ ಬರೆದದ್ದು ೨೦೦೩ರಲ್ಲಿ. ೨೦೦೮ರಲ್ಲಿ ಬರೆದ ಇದರ ವಿಸ್ತರಣೆಯನ್ನು ಇಲ್ಲಿ ನೋಡಿ!) ಪ್ರಕವಿ(Prakavi) ©2003 Pradeep Hegde. All rights reserved.