ತೈಲಶಕಟ ಪ್ರಸಂಗ

ಕಸದ ರಾಶಿಯಲಿ ತುಂಬಿ ತುಳುಕುವ
ನೊಣಗಳಂತೆ ಜಿಣುಗುವ ಜನ
ತುಂಬಿದ ತೈಲಶಕಟ ವಾಹನದೊಳು
ಅಲೆದಾಡುತಲಿದ್ದ ನೋಟ ಚಂಗನೆ
ನಿಂತಿತು ಬೆರಗಾಗಿ ನಿನ್ನ ಕಂಡು!

ಒಂದು ತೈಲಶಕಟ ಪ್ರಸಂಗ...

ಮುಂಜಾನೆ ನೋಟ..

ಬಾಗಿದ ಬೆನ್ನು,
ಮೂಟೆಯಂತಹಾ ಚೀಲ ಹೊತ್ತು,
ಮೆಲ್ಲನೆ ನಡೆಯುತ್ತಾ ಹೋಗುವುದನ್ನು
ನಾ ಕಂಡೆನು..