ದ್ವಿಪದಿಗಳು :: ಬದಲಾವಣೆ ಜಗದ ನಿಯಮ

ಬದಲಾವಣೆ ಜಗದ ನಿಯಮ
ಬದಲಾವಣೆ ಜಗದ ನಿಯಮ

ಕಾಲವೆಲ್ಲವನೂ ಬದಲಿಸುವುದೆನುವೇಕಯ್ಯಾ
ಕಾಲವಲ್ಲ, ಕಾಲದೊಡನೆ ಬದಲಾಗುವನು ಮನುಷ್ಯನಯ್ಯಾ..

ಹಿನ್ನೆಲೆಯಂತೆ ಬಣ್ಣ ಬದಲಾಯಿಸುವುದು ಓತಿಯಯ್ಯಾ
ಸಂದರ್ಭಕೆ ಬಣ್ಣ ಬದಲಾಯಿಸುವನು ಮನುಷ್ಯನಯ್ಯಾ..

ಋತುವಿನಂತೆ ಬದಲಾಗುವುದು ನಿಸರ್ಗವಯ್ಯಾ
ಸ್ವಾರ್ಥಕೆ ಬದಲಾಗುವನು ಮನುಷ್ಯನಯ್ಯಾ..

ಕಗ್ಗಲ್ಲ ಬಂಡೆಯೂ ಮರಳಾಗುವುದಯ್ಯಾ
ಬದಲಾಗದೊಲ್ಲವನು ಉಳಿವನೇನಯ್ಯ..

ಬದಲಾವಣೆ ಜಗದ ನಿಯಮವಯ್ಯಾ
ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ…

ಪ್ರಕವಿ(Prakavi)
©2009 Pradeep Hegde. All rights reserved.

ಚಿತ್ರಕೃಪೆ: World_Map_Icon.svg By The people from the Tango! project (The Tango! Desktop Project) [Public domain or Public domain], via Wikimedia Commons

3 thoughts on “ದ್ವಿಪದಿಗಳು :: ಬದಲಾವಣೆ ಜಗದ ನಿಯಮ

Leave a reply to sudeepkumar bn ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.