ನಿನ್ನ ಮರೆಯಲಾರೆ…

ನಿನ್ನ ಗೆಲುವೆನೆಂದು ಅಂದು
ನಿನಗೆ ಮನವ ಸೋತೆ
ನಿನ್ನ ಮರೆವೆನೆಂದು ಇಂದು
ಪಣವ ಕಟ್ಟಿ ಸೋತೆ

ಮರೆಯಾದರೂ ಕಣ್ಣ ಕಡಲಲ್ಲಿ
ನಲಿದಾಡುವೆ ಮನದ ಮುಗಿಲಲ್ಲಿ
ವಿರಹ ಬೆಂದರೂ ಒಡಲ ಮಡಿಲಲ್ಲಿ
ನೆಲೆಸಿರುವೆ ಎದೆಯ ಒಡಲಲ್ಲಿ

ಒಡೆದರೂ ನನ್ನೆದೆಯು
ಮಿಡಿವುದು ನಿನಗಾಗಿ
ಕೊಲೆಯಾದ ಕನಸುಗಳು
ಕಾಡುವವು ಗರವಾಗಿ

ನಿನ್ನ ಮರೆಯಲಾರೆನೇಕೆ
ಮಹಾ ಮರೆಗುಳಿಯಾದರೂ
ನಿನ್ನ ಬಯಸದಿರಲಾರೆನೇಕೆ
ಬಯಕೆಯ ಕೋಟೆ ಕುಸಿದರೂ…

ಪ್ರಕವಿ(Prakavi)
©2009 Pradeep Hegde. All rights reserved.

ಚಿತ್ರಕೃಪೆ: Gnome3-sad.svg By GNOME icon artists (GNOME SVN / GNOME FTP) [GPL], via Wikimedia Commons

7 thoughts on “ನಿನ್ನ ಮರೆಯಲಾರೆ…

  1. ಪ್ರಕವಿ,

    ಎಂದಿನಂತೆ ಕವಿತೆ ಶೈಲಿ ಚೆನ್ನಾಗಿದೆ….ಮತ್ತು ಮೊದಲ

    ನಿನ್ನ ಗೆಲುವೆನೆಂದು ಅಂದು
    ನಿನಗೆ ಮನವ ಸೋತೆ
    ನಿನ್ನ ಮರೆವೆನೆಂದು ಇಂದು
    ಪಣವ ಕಟ್ಟಿ ಸೋತೆ

    ಪದ್ಯ ತುಂಬಾ ಇಷ್ಟವಾಯಿತು.

    Like

ನಿಮ್ಮದೊಂದು ಅನಿಸಿಕೆ

This site uses Akismet to reduce spam. Learn how your comment data is processed.