ಪ್ರೇಮ ಮಂತ್ರ

ಪ್ರೇಮ ಮಂತ್ರ
ಪ್ರೇಮ ಮಂತ್ರ

ಕಲ್ಲಾದರೇನು, ಮಣ್ಣಾದರೇನು..
ಎದೆಯೊಡೆದು ಚೂರು
ನುಚ್ಚು ನೂರಾದರೇನು..

ಸ್ಥಾಪಿಸಿ ಪ್ರೇಮಲಿಂಗವ ಪೂಜಿಸುವೆ
ಉಷೆಯು ನಲಿಯುತ ಬಂದು
ನಿಷೆಯು ತೆರಳುವವರೆಗೂ..

ನೆಟ್ಟು ಪ್ರೇಮ ವೃಕ್ಷವ ಬೆಳೆಸುವೆ
ಅಕ್ಕರೆಯ ಗೊಬ್ಬರ ತಿನಿಸಿ
ಪ್ರೀತಿಯ ನೀರನುಣಿಸಿ..

ಪೋಣಿಸಿ ನೂರು ಚೂರುಗಳ
ನೆನಪ ಸರಮಾಲೆಯಲಿ
ಜಪಿಸುವೆ ಎಂದೆಂದೂ ಪ್ರೇಮಮಂತ್ರವ…

ಪ್ರಕವಿ(Prakavi)
©2009 Pradeep Hegde. All rights reserved.

7 thoughts on “ಪ್ರೇಮ ಮಂತ್ರ

ನಿಮ್ಮದೊಂದು ಅನಿಸಿಕೆ

This site uses Akismet to reduce spam. Learn how your comment data is processed.