ಪ್ರೇಮ ಗುಂಡಿ!

ಪ್ರೇಮದ ಗುಂಡಿ
ಪ್ರೇಮದ ಗುಂಡಿಗೆ ಬೀಳಬೇಡ್ರಪ್ಪೋ … !

ಸಾಗುತ ಜೀವನ ಪಥದಲಿ
ಬೀಳದಿರು ಪ್ರೇಮದ ಗುಂಡಿಗೆ..
ಬಿದ್ದೂ ಮುರಿಯದು ಕೈ ಕಾಲೆಂದು
ನಲಿಯದಿರು ಮಂಕೆ..
ಮನಮುರಿದು ಹೃದಯವೊಡೆದ
ಖಿನ್ನ ಜೀವವಾಗುವೆ ಜೋಕೆ!

ಈಜಲಾಗದು ಕಣ್ಣ ಕಡಲಲಿ
ಮುಳುಗಿ ಮೇಲೆದ್ದು ಬಂದವರಿಲ್ಲ
ಸುತ್ತದಿರು ನೀಳ ಕೇಶರಾಶಿಯಲಿ
ಕಳೆದು ಹೋಗಿ ಪತ್ತೆಯಾದವರಿಲ್ಲ
ಪ್ರೇಮರೋಗ ತಗುಲಿದ ಹೃದಯಕೆ
ಮಾಡಲಾಗದು ಕಸಿಯ, ಬರಡಾದ
ಮನವು ಚಿಗುರಿ ಹಸಿರಾದುದಿಲ್ಲ…

ಪ್ರಕವಿ(Prakavi)
©2009 Pradeep Hegde. All rights reserved.

Advertisements

9 thoughts on “ಪ್ರೇಮ ಗುಂಡಿ!

  1. ಪ್ರಕವಿಯವರೇ,

    ನಿಮ್ಮ ಕವನ ಓದಿದ ಮೇಲೆ ನನಗೆ ಹೀಗೆ ಬರೆಯಬೇಕೆನಿಸಿತು…

    ಬೀಳದಿರು ಪ್ರೇಮಗುಂಡಿಗೆ..ಬಿದ್ದರೆ ಜಿರಲೇಯಾಗಿಬಿಡುತ್ತೀಯಾ ಜೋಕೆ…

    ನಲಿಯದಿರು ಮಂಕೆ ಹೃದಯದ ನಾಡಿನ ನಡುವೆ ಕೊಲೆಸ್ಟರಾಲ್ ಆಗಿಬಿಟ್ಟೀಯಾ ಜೋಕೆ..

    ಈಜಲಾಗದು ಕಣ್ಣ ಕಡಲಲಿ ಮೊಂಡುಬಿದ್ದು ಈಜಿದರೆ…ಕಣ್ಣಂಚಿನ ಪಿಸುರೆಯಾಗಿವೆ ಜೋಕೆ…

    ಸುತ್ತದಿರು ನೀಳ ಕೇಶರಾಶಿಯಲಿ ಕರಿಕಪ್ಪು ಬಲೆಯಲ್ಲಿ ಹೇನು ಸೀರಾಗಿಬಿಟ್ಟೀಯೇ ಜೋಕೆ..

    ಪ್ರೇಮರೋಗ ತಗುಲಿದ ಹೃದಯಕೆ ಮಾಡಲಾಗದು ಕಸಿಯ ಮಾಡಿದರೂ ಅದು ಯಶಸ್ವಿ ಬೈಪಾಸ್

    ಸರ್ಜರಿ ಆಗದು ಮಂಕೆ…ಜೋಕೆ….ಇದು ಪ್ರೇಮದ ಗುಂಡಿ ಅಲ್ಲಲ್ಲ ಚೇಂಬರು….

    ಇಷ್ಟವಾದರೆ ಬೆನ್ನು ತಟ್ಟಿ…ಇಷ್ಟವಾಗದಿದ್ದಲ್ಲಿ…ಬೆನ್ನಿಗೆ ನಾಲ್ಕು ಬಾರಿಸಿ…ಪ್ರೀತಿಯಿಂದ….

    ಶಿವು.

    Like

  2. 🙂 ಕಂಗ್ಲೀಷು ಬೇಡವೆಂದು ಹಾಗೆ ಬರೆಯಲಿಲ್ಲ.
    ಪರವಾಗಿಲ್ಲ ಸಾರ್.. ಧನ್ಯವಾದಗಳು, version 2.0 ನೀಡಿದುದಕ್ಕೇ! ಹೀಗೇ ಬರೆಯುತ್ತಿರಿ, ನಿಮ್ಮನ್ನು “ಛಾಯಾ ಕವಿ”ಯೆನ್ನಬಹುದು.. 😉

    Like

  3. pramod, yaava kala premake maddu?… minchaagi baruva maLegaalana…becchane chaLigaalaana virahada bEgeya bEsige kaalaana?

    ಪ್ರದೀಪ್… ಸುತ್ತದಿರು ನೀಳ ಕೇಶರಾಶಿಯಲಿ
    ಕಳೆದು ಹೋಗಿ ಪತ್ತೆಯಾದವರಿಲ್ಲ… superb saalugaLu

    Like

  4. ಕನ್ನಂತರೇ, ಮೆಚ್ಚಿದ್ದಕ್ಕೆ ಸಂತೋಷ!
    ತುಂಬಾ ಧನ್ಯವಾದಗಳು! 🙂 🙂
    ಅಂದ ಹಾಗೆ… ನೀವು ಹೇಳಿದಂತೆ.. ಮದ್ದೂ ಒಮ್ಮೊಮ್ಮೆ ಕೈ ಕೊಡುವುದುಂಟು! 😉

    —–

    ಕಲ್ಲರೆಯಣ್ಣಾ! 🙂
    ಧನ್ಯವಾದಗಳು! 🙂

    Like

ನಿಮ್ಮದೊಂದು ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s