ಸಂಕ್ಷಿಪ್ತ ಕವಿ ಪುರಾಣ

ಸಂಕ್ಷಿಪ್ತ ಕವಿ ಪುರಾಣ
ಸಂಕ್ಷಿಪ್ತ ಕವಿ ಪುರಾಣ

ಭಾವನೆಯೆಂಬ ಗೆಳತಿಯ
ಕಲ್ಪನೆಯೆಂಬ ಪ್ರೇಯಸಿಯ
ಯೋಚನೆಯೆಂಬ ಮಡದಿಯ
ನಡುವೆ ಸಿಲುಕಿರುವ ಕಪಿ
ವಾನರಾಧೀಶನೆಂಬ ಕವಿ..

ಲೇಖನಿಯ ಸಾಂಗತ್ಯವಿರಲು
ಮಣೆಯಿಟ್ಟು ಕೀಲಿಮಣೆಗೆ
ಮಾತನಾಡಿಸಿ ಗೆಳತಿಯ
ಆಟವಾಡಿಸಿ ಪ್ರೇಯಸಿಯ
ಮಡದಿಯ ಏಟು ತಿನುವ
ಕಾವ್ಯವೆಂಬ ಕೂಸಿನ ಜನಕ..

ಖಡ್ಗಕಿಂತ ಹರಿತ ಲೇಖನಿಯು
ಬಂದೂಕಿಗಿಂತ ವಿಧ್ವಂಸಕ ಕೀಲಿಮಣೆಯು
ಎಂದು ಹಿಡಿಹಿಡಿದು ಬಡಪಾಯಿಗಳ
ತೋರಿಸಿ ಕಪಿಚೇಷ್ಠೆಯ ಕೇಳಿಸಿ
ಕೂಸಿನ ಕಥೆಯ, ತಲೆತಿಂದು ತೇಗುವ
ಪ್ರಕಾಶನಾಪುರದ ಕವನಾಸುರ…

ಪ್ರಕವಿ(Prakavi)
©2009 Pradeep Hegde. All rights reserved.

ಚಿತ್ರಕೃಪೆ: TextEdit Mac.png By cb2k ([1]) [GPL], via Wikimedia Commons

Advertisements

2 thoughts on “ಸಂಕ್ಷಿಪ್ತ ಕವಿ ಪುರಾಣ

  1. ಪ್ರದೀಪ್,

    ಭಾವನೆಯೆಂಬ ಗೆಳತಿಯ
    ಕಲ್ಪನೆಯೆಂಬ ಪ್ರೇಯಸಿಯ
    ಯೋಚನೆಯೆಂಬ ಮಡದಿಯ

    ಮಡದಿಯನ್ನು ಯೋಚನೆಗೆ ಹೋಲಿಸಬೇಡ್ರಿ…ಇಲ್ಲಿ ಸೂಚಿಸಿರುವುದು ಎಲ್ಲಾ ತಿರುಗು-ಮುರುಗಾಗಬಹುದು..

    ಯುಗಾದಿಯ ಶುಭಾಶಯಗಳು…

    Like

  2. ಶಿವು!
    ಇದು ಒಂದು ರೀತಿಯ ಕವಿಯ ಬಗ್ಗೆ ಇರುವ “ಪುರಾಣ!” ಮಡದಿಯಿದ್ದಾಗಲೂ ಪ್ರೇಯಸಿಯಿರುವವನು, ಬೇರೆ ಗೆಳತಿಯಿರುವವನು ಸಾಮಾನ್ಯವಾಗಿ ಇವರಲ್ಲಿ ಯಾರಿಗೆ ಹೆಚ್ಚು ಪ್ರಾಮುಖ್ಯತೆ ನೀಡುವನೆಂದು ಬಿಡಿಸಿ ಹೇಳಬೇಕಿಲ್ಲ ತಾನೆ! ಅದರರ್ಥ ಇದರಲ್ಲಿ ಬರುವ ಕವಿ ಆ ರೀತಿಯ ಮನುಷ್ಯನೆಂದಲ್ಲ. ಆದರೆ, ಕವನ ಬರೆವಾಗ ತಾರ್ಕಿಕ ಯೋಚನೆಗಿಂತ ಹೆಚ್ಚಿಗೆ ತನ್ನ ಭಾವನೆ, ಕಲ್ಪನೆಯನ್ನೇ ಪ್ರಮುಖವಾಗಿ ಬಳಸುವಾತ… ಅದಕ್ಕಾಗಿ ಈ ಹೋಲಿಕೆಗಳು ಅಷ್ಟೇ…
    😉

    Like

ನಿಮ್ಮದೊಂದು ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s