ಮನುಜಾಯಣ

ಮನುಜಾಯಣ

ಮನುಜಾಯಣ

ಹೆಸರಲ್ಲೇನಿದೆ?
ವಿಶಾಲ ಬ್ರಹ್ಮಾಂಡದನಂತ ದಿಕ್ಕುಗಳೊಳ
ನಭೋಮಂಡಲದ ಹೊದಿಕೆಯುಳ್ಳ
ಭೂಮಂಡಲದ ಮೈ ಮೇಲ್ಗಡೆ ಚಲಿಸುವ
ವಾನರ ಬಾಂಧವರ ಮೆದುಳುಳ್ಳ ಬುದ್ಧಿಗೇಡಿಯ
ಗುರುತು ಹಿಡಿಯಲಿಹುದು ಹೆಸರು..


ವಿಳಾಸದಲ್ಲೇನಿದೆ?
ಸೀಳಿ ಭೂಗರ್ಭವ, ಹಿಚುಕಿ ಭುವಿಯುಸಿರ
ಕಡಿದು ತನ್ನುಸಿರ ತಾನೇ
ಮೆರೆದು ಹಾಹಾಕಾರದಿ ಜಗದೊಡೆಯನಂತೆ
ಬೀಗುವ ಮೆದುಳುಳ್ಳ ಮೂರ್ಖನ
ವಾಸಸ್ಥಾನಕೆ ಕೈಪಿಡಿ ವಿಳಾಸ..


ನಿನ್ನಲ್ಲೇನಿದೆ?
ರವಿಯ ಸಂಘದ ಸದಸ್ಯರ ಸುತರಲಿ
ಶ್ರೇಷ್ಟನಾಗಿ ಹತ್ಯೆಯೆಸಗಿ ಆತ್ಮಸಾಕ್ಷಿಯ
ಶೋಷಿಸಿ ಅನ್ಯ ಭೂಸುತರ
ಮೆರೆವ ಮೆದುಳುಳ್ಳ ಮುಠ್ಠಾಳನೆಂಬ
ಸ್ವಾರ್ಥದಿ ಕೊಬ್ಬಿದ ಅವಿದ್ಯಾವಂತ ಅಕ್ಷರಸ್ಥ…

ಈ ಕವನದ ಎರಡನೆಯ ಭಾಗ, ಮನುಜಾಯಣ ಭಾಗ-೨ ನೋಡಲು ಇಲ್ಲಿ ಕ್ಲಿಕ್ಕಿಸಿರಿ

ಪ್ರಕವಿ(Prakavi)
©2009 Pradeep Hegde. All rights reserved.

Advertisements

About ಪ್ರಕವಿ

ಕವನ ಬರೆದಾಗ ಪ್ರಕವಿ, ಲೇಖನ ಬರೆದಾಗ ಪ್ರಲೇಖ! ಚಿತ್ರ ತೆಗೆಯುವಾಗ ಪ್ರಚಿತ್ರ! ಹಾಗೂ, ನಿಮ್ಮನ್ನು ನಗಿಸುವಾಗ ಪ್ರಹಾಸ! Hi. I am Pradeep. Do not ask me who am I. For, I am just a mere human who likes to create, to capture the beauty and essence of nature, to savour and share the merits of humour, to write on what seems worthwhile, or to exercise my poetic license.

Posted on ಜನವರಿ 9, 2009, in ಕನ್ನಡ, ಕವನ, ಕ್ರಾಂತಿ, ಮನುಜಾಯಣ, Kannada Poems, kavana and tagged , , , , , , , , , , , , , , , , , . Bookmark the permalink. 7 ಟಿಪ್ಪಣಿಗಳು.

 1. ಪ್ರಕವಿ….

  ಕವನ ಸಕ್ಕತ್ತಾಗಿದೆ….ನಿಮ್ಮ ಅಭಿಪ್ರಾಯ ಸರಿಯೆನಿಸುತ್ತೆ……

  Like

 2. ಮನುಷ್ಯನ ಫುಲ್ ಅಡ್ರಸ್ಸನ್ನೇ ಹೇಳಿ ಬಿಟ್ರಲ್ರೀ ನೀವು. 🙂

  Like

 3. ಶಿವು ಅವರೇ! ಇದು ಕೇವಲ ಅಭಿಪ್ರಾಯವಲ್ಲ ಕಣ್ರೀ! ಇಂದಿನ ಮನುಜರ “ಯಶೋಗಾಥೆ!” 🙂

  ಪ್ರಮೋದರೇ, ಪೂರ ಮುಗಿದಿಲ್ಲ! ಹೇಳಲಿನ್ನೂ ಇದೆ! 🙂

  Like

 4. pradeep,

  Poorti mugsappaaaaaaa… adyaake ardharda tagombarteeya?

  Like

 5. ಈ ಕವನ ಪೂರ್ತಿಯೇ ಇದೆ ಕಣ್ರೀ ಮಹೇಶ್! ಮನುಷ್ಯನ ಪೂರ್ತಿ ಕಥೆ ಇಷ್ಟೇ ಅಲ್ಲ ಎಂಬರ್ಥದಿಂದ ಹಾಗೆ ಹೇಳಿದ್ದೆ, ಅಷ್ಟೇ… 😉

  Like

 6. ಪ್ರದೀಪ್,

  ಹೊಸ ಕವನವನ್ನು ಬ್ಲಾಗಿಗೆ ಹಾಕಿದ್ದೇನೆ…..ನೋಡಿ…..ನಿಮಗೆ ಹೇಗನ್ನಿಸುತ್ತದೆ ಪ್ರತಿಕ್ರಿಯಿಸಿ…..ಕವನದ ವಿಚಾರದಲ್ಲಿ ನಾನು ಹೊಸಬ….ನಿಮ್ಮ ಪ್ರತಿಕ್ರಿಯೆ ನನ್ನ ಮುಂದಿನ ಬರವಣಿಗೆಗೆ ಸ್ಪೂರ್ತಿ,….

  http://chaayakannadi.blogspot.com/

  ಪ್ರೀತಿಯಿರಲಿ….

  ಶಿವು….

  Like

 7. ಚೆನ್ನಾಗಿದೆ ಸಾರ್! ಮುಂದುವರೆಯಲಿ ನಿಮ್ಮ ಕವನ ಪಯಣ!! ;-D

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: