ಜಾಗರಣೆ

ಜಾಗರಣೆ

ನೀರಿನ ಅಲೆಯಲ್ಲಿ ಕರಗಿ ಹೋದ ಭಾಸ್ಕರ
ಮೂಡಲ ಗಿರಿಯಿಂದ ಇಣುಕಿ ಬಂದ ಚಂದಿರ
ಇರುಳಿನ ಸೊಬಗ ನಿತ್ಯ ಸವಿಯೋ ಯೋಗ..
ಹಿಡಿಯಿತೆಂದಿನಿಂದ ಹಾಳು ಪ್ರೇಮ ರೋಗ…

ನಿನ್ನ ನೆನಪಿನ ತೆಪ್ಪದಲ್ಲಿ ತೇಲುವ
ನಿದ್ರೆಗೆ ರಾತ್ರಿಯೆಲ್ಲ ಜಾಗರಣೆ..
ಪ್ರೇಮದ ಬಾವಿಯೊಳು ಬಿದ್ದಿಹ ನನಗೆ
ಮಿಗಿಲಾದುದಿಲ್ಲ ಬೇರೆ ಆಚರಣೆ..
ಕಂಗಳನು ತೆರೆದೇ ಕನಸು ಕಾಣೋ ಯೋಗ..
ಹಿಡಿಯಿತೆಂದಿನಿಂದ ಹಾಳು ಪ್ರೇಮ ರೋಗ…

ಚಂದ್ರನ ಮೊಗದ ಕಲೆಗಳ ಕಳೆದರೆ
ನಿನ್ನ ಮೊಗವದೆಂದು ಬೇರೆ ಮಾತಿಲ್ಲ..
ಮಿನುಗು ತಾರೆಗಳ ಹೊಳಪೆಲ್ಲ ಸೇರಿಯೂ
ನಿನ್ನ ಕಂಗಳ ಹೊಳಪಿಗೆ ಸಾಠಿಯಿಲ್ಲ..
ಕಂಗಳ ಕಡಲಲ್ಲೇ ಮುಳುಗಿ ಹೋಗೋ ಯೋಗ..
ಹಿಡಿಯಿತೆಂದಿನಿಂದ ಹಾಳು ಪ್ರೇಮ ರೋಗ…

ಗೂಬೆ, ಬಾವಲಿಗಳಿನ್ನು ನನಗೆ ಮಿತ್ರರು
ಆಗಿರುವೆನು ನಾ ನಿಶಾಚರಿ..
ಈ ಶೋಚನೀಯ ಪಾಡ ರೋಧಿಸುತಲಿವೆ
ರಾತ್ರಿಯಿಡೀ ಕೂಡಿಕೊಂಡು ನಾಯಿ-ನರಿ..
ಇರುಳು ನಿದ್ದೆಗೆಟ್ಟು ಹಗಲು ಮಲಗೋ ಯೋಗ..
ಹಿಡಿಯಿತೆಂದಿನಿಂದ ಹಾಳು ಪ್ರೇಮ ರೋಗ…

ತಿಂಗಳ ಬೆಳಕಲಿ ಹೊಳೆವ ಮುತ್ತಿನಂತೆ
ನಗುವ ನಿನ್ನ ದಂತದ ಸಾಲುಗಳು..
ತಂಗಾಳಿಗೆ ನಲಿವ ಅಲೆಗಳಂತೆ
ನಲಿವವು ನಿನ್ನ ಮುದ್ದು ಮುಂಗುರುಳು..
ಕೇಶರಾಶಿಯಲೇ ಕಳೆದು ಹೋಗೋ ಯೋಗ..
ಹಿಡಿಯಿತೆಂದಿನಿಂದ ಹಾಳು ಪ್ರೇಮ ರೋಗ…

ಮುಂಜಾವಿನ ಕೆಂಪು ಬಾನಿನಂತೆ
ತುಟಿಗಳೆಂಬ ನಿನ್ನ ಹೂಗಳ ಮೊಗ್ಗು..
ತುಟಿಗಳು ನಕ್ಕಾಗ, ಮೊಗ್ಗು ಅರಳುವಾಗ
ಮನದ ದುಂಬಿಗೆ ಎಲ್ಲಿಲ್ಲದ ಹಿಗ್ಗು!
ನಿನದೇ ಸುಗಂಧ ಬಯಸುತಿರೋ ಯೊಗ..
ಹಿಡಿಯಿತೆಂದಿನಿಂದ ಹಾಳು ಪ್ರೇಮ ರೋಗ…

ನೀರಿನ ಅಲೆಯಲ್ಲಿ.. ಅಡಗುತಿರುವ ಚಂದಿರ
ಮೂಡಲ ಮನೆಯಿಂದ ಮೂಡಿ ಬಂದ ಭಾಸ್ಕರ!
ರಾತ್ರಿ ಹಗಲೆಲ್ಲಾ ನಿನ್ನನೇ ನೆನೆಯೋ ಯೋಗ..
ಹಿಡಿಯಿತೆಂದಿನಿಂದ ಹಾಳು ಪ್ರೇಮ ರೋಗ…

ಪ್ರಕವಿ(Prakavi)

©2008 Pradeep Hegde. All rights reserved.

ಚಿತ್ರಕೃಪೆ: Nuvola_apps_kmoon.png By David Vignoni (http://icon-king.com) [LGPL or LGPL], via Wikimedia Commons

2 thoughts on “ಜಾಗರಣೆ

ನಿಮ್ಮದೊಂದು ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s