ಕಾಲದ ನದಿಯ ತೀರದಲಿ…

ಬದುಕಿನ ಹಾದಿಯ ಬವಣೆಯ ತಿರುವಿನಲಿ
ನೀ ಕೈಬಿಟ್ಟರೇನು.. ಮುಗಿದಿಲ್ಲ ಪಯಣವಿನ್ನೂ
ಸುಂದರ ದಿನದ ಮೋಹಕ ಮುಸ್ಸಂಜೆ ಕಳೆದು
ಕತ್ತಲಾದರೇನು.. ಆಗಿಲ್ಲ ಮುಂಜಾನೆಯಿನ್ನೂ…

ಬಾಡಿ ಹೋದ ನಿನ್ನ ನೆನಪಿನ ಹೂಗಳನು
ಮರೆವೆಂಬ ಮೂಟೆಗೆ ತುರುಕಿ,
ಭೋರ್ಗರೆವ ಕಾಲದ ನದಿಯ ತಳಕ್ಕೆಸೆದು
ಮುಂದುವರೆಸಿರುವೆ ಪಯಣವ, ಒಂಟಿ ಕಾಳರಾತ್ರಿಯಲಿ
ಮುಂಜಾನೆಯ ಕಿರಣಗಳನರಸುತ್ತಾ…

ಹರಿವ ಕಾಲದ ನದಿಯ ಶುಭ್ರ ಜಲವನ್ನು
ಎರಚಿ ಮನದ ಮೂತಿಗೆ, ತೊಳೆದು ನಿನ್ನೆಯ ಕೊಳೆಯ,
ಮಾಡಿ ಇಂದಿನ ಜಳಕವ, ಸಜ್ಜಾಗಿ ಮುಂದಕ್ಕೆ
ನಿಂತಿರುವೆ ಹೊರಟು, ಬಾಳ ಹಾದಿಯಲಿ
ಮುಂಜಾನೆಯ ಕಿರಣಗಳ ಸ್ವಾಗತಿಸಿ…

ಪ್ರಕವಿ(Prakavi)
©2008 Pradeep Hegde. All rights reserved.

15 thoughts on “ಕಾಲದ ನದಿಯ ತೀರದಲಿ…

  1. ಚಿತ್ರಾ, ಶಿವು ಅವರೇ! ಧನ್ಯವಾದಗಳು. ಸರಿಯಾಗಿ ಹೇಳಿದ್ದೀರಿ… ಇದು ಬದುಕಿನ ಪಯಣ. ಹಾಗೆಯೇ ಹೆಸರಿಡೋಣವೆಂದು ಯೋಚಿಸಿದ್ದೆ, ಆದರೆ ಕೊನೆ ಗಳಿಗೆಯಲ್ಲಿ ಈಗಿದ್ದ ಹೆಸರ ನೀಡಿ ಪ್ರಕಾಶಿಸಿದೆ.
    ಕಲ್ಲರೆ ಅವರೇ, ನಿಮಗಿಷ್ಟವಾದುದು ಸಂತೋಷವಾಯಿತು… 🙂

    Like

ನಿಮ್ಮದೊಂದು ಅನಿಸಿಕೆ

This site uses Akismet to reduce spam. Learn how your comment data is processed.