ಕಾಲದ ನದಿಯ ತೀರದಲಿ…

ಬದುಕಿನ ಹಾದಿಯ ಬವಣೆಯ ತಿರುವಿನಲಿ
ನೀ ಕೈಬಿಟ್ಟರೇನು.. ಮುಗಿದಿಲ್ಲ ಪಯಣವಿನ್ನೂ
ಸುಂದರ ದಿನದ ಮೋಹಕ ಮುಸ್ಸಂಜೆ ಕಳೆದು
ಕತ್ತಲಾದರೇನು.. ಆಗಿಲ್ಲ ಮುಂಜಾನೆಯಿನ್ನೂ…


ಬಾಡಿ ಹೋದ ನಿನ್ನ ನೆನಪಿನ ಹೂಗಳನು
ಮರೆವೆಂಬ ಮೂಟೆಗೆ ತುರುಕಿ,
ಭೋರ್ಗರೆವ ಕಾಲದ ನದಿಯ ತಳಕ್ಕೆಸೆದು
ಮುಂದುವರೆಸಿರುವೆ ಪಯಣವ, ಒಂಟಿ ಕಾಳರಾತ್ರಿಯಲಿ
ಮುಂಜಾನೆಯ ಕಿರಣಗಳನರಸುತ್ತಾ…


ಹರಿವ ಕಾಲದ ನದಿಯ ಶುಭ್ರ ಜಲವನ್ನು
ಎರಚಿ ಮನದ ಮೂತಿಗೆ, ತೊಳೆದು ನಿನ್ನೆಯ ಕೊಳೆಯ,
ಮಾಡಿ ಇಂದಿನ ಜಳಕವ, ಸಜ್ಜಾಗಿ ಮುಂದಕ್ಕೆ
ನಿಂತಿರುವೆ ಹೊರಟು, ಬಾಳ ಹಾದಿಯಲಿ
ಮುಂಜಾನೆಯ ಕಿರಣಗಳ ಸ್ವಾಗತಿಸಿ…

ಪ್ರಕವಿ(Prakavi)
©2008 Pradeep Hegde. All rights reserved.

ಕಾಲದ ನದಿಯ ತೀರದಲಿ...

ಕಾಲದ ನದಿಯ ತೀರದಲಿ...

ಚಿತ್ರಕೃಪೆ: Forggensee Panorama SK 0001.jpg By Simon Koopmann (own work, merged from 4×1 landscape shots) [CC-BY-SA-2.0-de], via Wikimedia Commons

Advertisements

About ಪ್ರಕವಿ

ಕವನ ಬರೆದಾಗ ಪ್ರಕವಿ, ಲೇಖನ ಬರೆದಾಗ ಪ್ರಲೇಖ! ಚಿತ್ರ ತೆಗೆಯುವಾಗ ಪ್ರಚಿತ್ರ! ಹಾಗೂ, ನಿಮ್ಮನ್ನು ನಗಿಸುವಾಗ ಪ್ರಹಾಸ! Hi. I am Pradeep. Do not ask me who am I. For, I am just a mere human who likes to create, to capture the beauty and essence of nature, to savour and share the merits of humour, to write on what seems worthwhile, or to exercise my poetic license.

Posted on ಡಿಸೆಂಬರ್ 10, 2008, in ಕನ್ನಡ, ಕವನ, ಕವಿತೆ, ಕಾಲ, ನೆನಪುಗಳು, ಪದ್ಯ, ಪಯಣ, ಬದುಕ ಪಯಣ, Kannada Poems, kavana and tagged , , , , , , , , , , , , , , , , , , , , . Bookmark the permalink. 15 ಟಿಪ್ಪಣಿಗಳು.

 1. nice one sirr…. madhyada saalugalu ishta aaytu
  heege bareetiri….

  Like

 2. ಪ್ರಕವಿಗಳೇ,

  ಚಿತ್ರ ಮಾತನ್ನು ನಾನು ಒಪ್ಪುತ್ತೇನೆ…..

  Like

 3. ಚಿತ್ರಾ, ಶಿವು ಅವರೇ! ಧನ್ಯವಾದಗಳು. ಸರಿಯಾಗಿ ಹೇಳಿದ್ದೀರಿ… ಇದು ಬದುಕಿನ ಪಯಣ. ಹಾಗೆಯೇ ಹೆಸರಿಡೋಣವೆಂದು ಯೋಚಿಸಿದ್ದೆ, ಆದರೆ ಕೊನೆ ಗಳಿಗೆಯಲ್ಲಿ ಈಗಿದ್ದ ಹೆಸರ ನೀಡಿ ಪ್ರಕಾಶಿಸಿದೆ.
  ಕಲ್ಲರೆ ಅವರೇ, ನಿಮಗಿಷ್ಟವಾದುದು ಸಂತೋಷವಾಯಿತು… 🙂

  Like

 4. ಎಷ್ಟೊಂದು ಚೆನ್ನಾಗಿ ಬರಿತೀರ

  Like

 5. ಸಂತೋಷ್ ಅವರೇ, ನೀವು ಬಂದದ್ದು ಸಂತೋಷವಾಯಿತು… 🙂

  Like

 6. ಪ್ರಕವಿ….

  ಇದು ಜೀವನದ..”ಭರವಸೆ”……..

  Like

 7. ಹೌದು ಪ್ರಕಾಶರೇ… ಜೀವನದಲ್ಲಿ ಯಾವತ್ತೂ ಭರವಸೆ ಕಳೆದುಕೊಳ್ಳಬಾರದು… 😀

  Like

 8. ಸೂಪರ್, ನಾಳೆಗೆ ಶುಭವಾಗಲಿ.. 😉

  Like

 9. ಬದುಕಿನ ಪಯಣದ ಒಂದು ಸುಂದರ ಕವನ…

  ಗಣೇಶ್.ಕೆ.

  Like

 10. ಪ್ರಮೋದ್, ಗಣೇಶ್ ಅವರೇ, ಧನ್ಯವಾದಗಳು… ಬರ್ತಾ ಇರಿ… ಹಾಗೇ, ನೀವೆಲ್ಲರೂ! 🙂

  Like

 11. nanege e kavana bareda hagide, thumba chennagide sir

  Like

 12. ಧನ್ಯವಾದಗಳು, ಬೃಂದಾ ಅವರೇ.. 🙂

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: