ಕಂಗ್ಲೀಷ್ ನಾಡು.. !

ಕನ್ನಡವೆಲ್ಲಿ.. ಕನ್ನಡವೆಲ್ಲಿ..
ಕನ್ನಡ ನಾಡಲಿ ಕನ್ನಡವೆಲ್ಲಿ?!

ಅಪ್ಪ-ಅಮ್ಮ ಇರರಿಲ್ಲಿ
ಅಣ್ಣ-ಅಕ್ಕ ಕಾಣರಿಲ್ಲಿ
ತಮ್ಮ-ತಂಗಿಯರಿಲ್ಲೆಲ್ಲಿ?
ನಮ್ಮ ಕರುನಾಡಲ್ಲಿ…

ತಂದೆ, ತಾಯಿಯ ಕೊಂದು ಮುಗಿಸಿ
ಮಮ್ಮಿ, ಡ್ಯಾಡಿಯು ಮೆರೆಯುತಿಹರು..
ಸೋದರ, ಸೋದರಿಯರನ್ನು ಬಂಧಿಸಿ
ಬ್ರದರ್ರು, ಸಿಸ್ಟರ್ರು ಬೀಗುತಿಹರು…

ಅನ್ನ, ಪಲ್ಯಗಳಿಲ್ಲಿ ಸಿಗವು
ಊಟ, ತಿಂಡಿಯಿಲ್ಲೆಲ್ಲೂ ಸಿಗವು..
ರೈಸು, ಸಬ್ಜಿಯೇ ಬಾಯಿಗಿಲ್ಲಿ
ಮೀಲ್ಸು, ಟಿಫನ್ನೇ ಹೊಟ್ಟೆಗಿಲ್ಲಿ…

ಗಂಧದ ಗುಡಿಯಲಿ ಗಂಧವಿಲ್ಲ
ಸ್ಯಾಂಡಲ್ ವುಡ್ಡಿನ ಸ್ಮೆಲ್ಲೇ ಎಲ್ಲ..
ಮಗ, ಮಗಳು ಹುಟ್ಟದ ನಾಡು
ಸನ್ನು, ಡಾಟರುಗಳೇ ನವ ಜನಾಂಗ ನೋಡು…

ತನು ಮನವೆಲ್ಲಾ ಇಂಗ್ಲೀಷು,
ನಡೆ ನುಡಿಯೆಲ್ಲಾ ಕಂಗ್ಲೀಷು..
ಕನ್ನಡ ತಪ್ಪಿಯೂ ನುಡಿದರೆ ಜೋಕೆ!
ಅನ್ನಿಸಿಕೊಳ್ಳುವೆ ’ಫೂಲೀಷು” !

ಪ್ರಕವಿ(Prakavi)

©2008 Pradeep Hegde. All rights reserved.

ಚಿತ್ರಕೃಪೆ: Emblem-conflicting.svg By The people from the Tango! project (The Tango! Desktop Project) [Public domain or Public domain], via Wikimedia Commons

3 thoughts on “ಕಂಗ್ಲೀಷ್ ನಾಡು.. !

  1. ಬೆಂಗಳೂರಿನಲ್ಲಿ ಮಾತ್ರ ಅಲ್ಲ ಶಿವು ಅವರೇ, ಎಲ್ಲೆಡೆ ಹೀಗೆ ನಡೀತಿದೆ. ಅದಕ್ಕೇ ಮೇಲೆ “ಕನ್ನಡದ ಬೆಳವಣಿಗೆ” ಎಂದು ಲೇಖನ ಬರೆದು, ಭಾಷಾ ಕಲಬೆರಕೆ ಅಳೆಯೋ ಸೂತ್ರ ಕೂಡಾ ತಯಾರು ಮಾಡಿ ಕೊಟ್ಟಿದ್ದೆ. ಯಾರೂ ಗಮನಿಸಿದಂತಿಲ್ಲ…

    Like

ನಿಮ್ಮದೊಂದು ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.