ನೆನಪುಗಳು…

ನೆನಪುಗಳು.. ಸವಿ ನೆನಪುಗಳು
ಬಂದಾಗ ಬೇಸರವಾಗುವುದು..
ಆ ದಿನಗಳು.. ಆ ಕ್ಷಣಗಳು..
ಇನ್ನಿಲ್ಲವೆಂದು!

ನೆನಪುಗಳು.. ಕಹಿ ನೆನಪುಗಳು
ಬಂದಾಗ ಸಂತಸವಾಗುವುದು..
ಆ ದಿನಗಳು.. ಆ ಕ್ಷಣಗಳು..
ಇನ್ನಿಲ್ಲವೆಂದು!

ಕಾಲದ ಲೇಖನಿಯು,
ಮನಸಿನ ಪುಟದಲಿ..
ಪ್ರತಿಯೊಂದೂ ಕ್ಷಣದಲ್ಲೂ..
ಏನೋ ಗೀಚುತಿರುವುದು..
ಮನಸೆಂಬ ಮರ್ಕಟವದನು
ಪದೇ ಪದೇ ಓದುವುದು..
ನೆನಪಿನಲ್ಲೇ ಮುಳುಗುವುದು…

ಮನಸಿನ ಮೂಟೆಯಲಿ..
ನೂರಾರು ನೆನಪು ತುಂಬಿವೆ
ಸಿಹಿ-ಕಹಿ ಎರಡೂ ಬೆರೆತು..
ಬೇವು-ಬೆಲ್ಲದಂತಿದೆ..
ಬಾಳೆಂಬ ಸಂಕ್ರಾಂತಿಯು
ಸಿಹಿಯ, ಕಹಿಯ ಹಂಚಿದೆ..
ನೋವು, ನಲಿವ ಹಂಚಿದೆ…

ನೆನಪಿನ ಕಡಲಿನಲಿ..
ಇಂದಿನ ದೋಣಿ ತೇಲುತಿದೆ
ಅಲೆಗಳಿಗೆ ಸಿಲುಕಿಕೊಂಡು..
ಎದ್ದು ಬಿದ್ದು ಒದ್ದಾಡಿದೆ
ನಿನ್ನೆಯಲೇ ಯಾಕಿರುವೆ?
ಅಂತ ನಾಳೆ ಅಂದಿದೆ..
ಕೈ ಬೀಸಿ ಕರೆದಿದೆ…

ಮೋಡದ ಮರೆಯಿಂದ,
ಸೂರ್ಯ ಕಿರಣ ಹೊಮ್ಮಿದೆ..
ಮನಸನು ಬಳಿ ಕರೆದು..
ಏನೋ ಮಾತನಾಡಿದೆ
ಹಿಂದೆಂದೂ ನೋಡದಿರು,
ಮುಂದೆ ಸಾಗು ಅಂದಿದೆ..
ಜೀವನದ ಹಾದಿಯಲಿ
ಸಾಗುತಲಿರು ಅಂದಿದೆ…

(ನೆನಪುಗಳು v2 (೨೦೦೮), ಇದು ನನ್ನ ನೆನಪುಗಳು-೨೦೦೩ರ ಕವನದ ವಿಸ್ತರಣೆ)
ಪ್ರಕವಿ(Prakavi)
©2008 Pradeep Hegde. All rights reserved.

4 thoughts on “ನೆನಪುಗಳು…

ನಿಮ್ಮದೊಂದು ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s