ಹೌದಲ್ಲವೇ?!!

ಬುದ್ಧಿಯಿಲ್ಲದಾ ಕುದುರೆ,
ತುಂಬಿ ಬೆಳೆದಾ ಕತ್ತೆ,
ಎರಡೂ ಒಂದೇ! ಎರಡೂ ಒಂದೇ!
ಅಲ್ಲವೇ…

ಕೊಳ್ಳೆ ಹೊಡೆಯುವಾ ಕಳ್ಳ,
ಭಕ್ಷಿಸುವಾ ರಕ್ಷಕ,
ಎರಡೂ ಒಂದೇ! ಎರಡೂ ಒಂದೇ!
ಅಲ್ಲವೇ…

ಮೋಸಗಾರನಾ ನುಡಿಯೂ,
ಪುಢಾರಿಯಾ ಭಾಷಣವೂ,
ಎರಡೂ ಒಂದೇ! ಎರಡೂ ಒಂದೇ!
ಅಲ್ಲವೇ…

ನಾಡಿನಾ ಹೆದ್ದಾರಿಯೂ,
ನರಕದಾ ಹೆಬ್ಬಾಗಿಲೂ,
ಎರಡೂ ಒಂದೇ! ಎರಡೂ ಒಂದೇ!
ಅಲ್ಲವೇ…

ಅರ್ಥವಿಲ್ಲದಾ ಪಠ್ಯ,
ಸತ್ವವಿಲ್ಲದಾ ಊಟ,
ಎರಡೂ ಒಂದೇ! ಎರಡೂ ಒಂದೇ!
ಅಲ್ಲವೇ…

ನೋಡಿಯೂ ನೋಡದಂತಿರುವಾ
ಜನಸಾಮಾನ್ಯ,
ಸ್ಮಶಾನದಲ್ಲಿ ದಿಮ್ಮಿಯಂತೆ
ಬಿದ್ದಿರುವಾ ಹೆಣ…
ಎರಡೂ ಒಂದೇ! ಎರಡೂ ಒಂದೇ!
ಅಲ್ಲವೇ…

ಹೌದಲ್ಲವೇ…

ಪ್ರಕವಿ(Prakavi)
©2008 Pradeep Hegde. All rights reserved.

ಚಿತ್ರಕೃಪೆ: Kexi logo.svg By Kexi Project (Source package at [1]) [LGPL], via Wikimedia Commons

2 thoughts on “ಹೌದಲ್ಲವೇ?!!

  1. ಪ್ರಿಯ ಕನ್ನಂತರೇ!, ನಮ್ಮ ದೇಶದ ದುಸ್ಥಿತಿಯನ್ನು ಕಾವ್ಯರೂಪದಲ್ಲಿ ತಿಳಿಸಲು ಇದೊಂದು ಪುಟ್ಟ ಪ್ರಯತ್ನ. ಅದಕ್ಕಿಂತಲೂ ನೋವಿನ ಸಂಗತಿಯೇನೆಂದರೆ, ಇದರ ಬಗೆಗೆ ನಮ್ಮ ಜನತೆ ತೋರುವ ದಿವ್ಯ ನಿರ್ಲಕ್ಷ್ಯ..

    Like

ನಿಮ್ಮದೊಂದು ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s