» ಕನ್ನಡದ ಬೆಳವಣಿಗೆ!

ಕನ್ನಡದ ಬೆಳವಣಿಗೆ! »
ಹಳೆಗನ್ನಡ » ಹೊಸಗನ್ನಡ » ಹಾಳುಗನ್ನಡ !

ಮಸ್ಕಾರ “ಕನ್ನಡಿಗರೇ”!! (ಅಥವಾ ಕಂಗ್ಲೀಷ್ ಬಾಂಧವರೇ!).. ಎಷ್ಟು ಸಲ ಅನ್ನಕ್ಕೆ rice ಅಂದಿದ್ದೀರಿ? ಊಟಕ್ಕೆ meals ಅಂದಿದ್ದೀರಿ? ಮನೆಗೆ home ಅಂದಿದ್ದೀರಿ? ಅಮ್ಮನಿಗ mummy, ಅಪ್ಪನಿಗೆ daddy ಅಂದಿದ್ದೀರಿ? ಎಷ್ಟು ಬಾರಿ ಕನ್ನಡದ ಅಂದವನ್ನು ಈ ರೀತಿ ಕೆಡಿಸಿದ್ದೀರಿ?? ತಿಳಿದೋ-ತಿಳಿಯದೋ ಕನ್ನಡದ ಇಂಪನ್ನು ಮೂಲೆಗುಂಪನ್ನಾಗಿ ಮಾಡಿದ್ದೀರಿ??

ಕನ್ನಡದ ಬೆಳವಣಿಗೆ(evolution)::
ಪುರಾತನ ಕಾಲ :: ಹಳೆಗನ್ನಡ
ಮಧ್ಯಮ ಕಾಲ :: ಹೊಸಗನ್ನಡ
ಈಗಿನ ಕಾಲ :: ಹಾಳುಗನ್ನಡ (ಇದರ ಒಂದು ರೂಪ (“version”), ಕಂಗ್ಲಿಷ್(“kanglish”)

“ನನಗೆ white rice, ಅವ್ರಿಗೆ boiled rice”, “ಬೆಳಿಗ್ಗೆ tiffin ಆಯ್ತಾ?”, “ನಾಳೆ evening ಸಿಗೋಣ”, “ನಾಡಿದ್ದು morning ಬರ್ತೇನೆ”, “reach ಆಗುವಾಗ 9’o clock ಆಗ್ಬಹುದು”, “ಇವ್ರು ನನ್ನ brother”……….

ಸಾಕೆ? ಇನ್ನೂ “examples” ಬೇಕೆ? (“ಉದಾಹರಣೆಗಳು” ಎಂದರೆ ಕೆಲವರಿಗೆ ಅರ್ಥವಾಗದೆ ಇರಬಹುದು)
ಯಾಕೆ “smile” ಮಾಡ್ತಾ ಇದ್ದೀರಿ? ನೀವೇ ಸಹಸ್ರಾರು ಬಾರಿ, ಈ ರೀತಿ ಕನ್ನಡದ ಕಗ್ಗೊಲೆ ಮಾಡಿರುವಿರಿ.. “ಓಹೋ! ಇವನೇನು, ಮಹಾ ಕನ್ಡಡ ಪ್ರೇಮಿ!” ಎಂದು ಯೋಚಿಸ್ತಿದ್ದೀರಾ.. ನಾನೇನು ಶುದ್ದ ಕನ್ನಡ ಬಲ್ಲವನಲ್ಲ. ನನ್ನ ಭಾಷೆಯಲ್ಲಿ ಹಲವಾರು ವ್ಯಾಕರಣ ದೋಷಗಳನ್ನು (gramattical errors) ಯಾರೂ(ಅಂದ್ರೆ, ವ್ಯಾಕರಣ ಬಲ್ಲವರು) ಬಹಳ ಕಷ್ಟವಿಲ್ಲದೇ ಕಂಡುಹಿಡಿಯಬಹುದು. Bus ಅನ್ನು ತೈಲಶಕಟ ವಾಹನ ಅನ್ನುವ ಬದಲು ಬಸ್ಸು (bus) ಎಂದರೇ ಸುಲಭ, computer ಅನ್ನು ಗಣಕ ಯಂತ್ರ, t.v ಯನ್ನು ದೂರದರ್ಶಕ ಯಂತ್ರ, ಹಾಗೂ ಈ ರೀತಿಯ ಇನ್ನಿತರೆ ಬಲು ಕ್ಷಿಪ್ಲಕರವಾದ ಪದಗಳನ್ನು ಅದರ ಅಂಗ್ಲ ರೂಪದಲ್ಲಿ ಬಳಸಿದರೇ ಚೆನ್ನ. ಆದ್ರೆ, ಅನ್ನ, ತಿಂಡಿ, ಸಂಜೆ, ಬೆಳಿಗ್ಗೆ, ಅಣ್ಣ… ಮುಂತಾದ ಸುಲಭ ಪದಗಳನ್ನು ಬಳಸುವ ಬದಲು, rice, tiffin, evening, morning, ಎಂದೆಲ್ಲಾ ಮಾತನಾಡುವಾಗ ಬಳಸುವುದು ಯಾವ ರೀತಿಯಲ್ಲಿ ಹೆಚ್ಚು ಅನುಕೂಲಕರ(convenient)?? ನೀವಿದನ್ನು ನಿಮಗೆ ತಿಳಿಯದೆಯೇ ಬಳಸುತ್ತಿರಬಹುದು, ತಿಳಿದೇ ಬಳಸುತ್ತಿರಬಹುದು. ಆದರೆ, ಇದು ಕನ್ನಡದ ಅಂದವನ್ನು, ಕನ್ನಡದ ಕಂಪನ್ನು ಹಾಳುಗೆಡವುತ್ತಿದೆ. ನಿಮಗೆ ಆಂಗ್ಲ ವ್ಯಾಮೋಹವು ಅಷ್ಟು ಹೆಚ್ಚಾಗಿದ್ದರೆ, ಅದನ್ನೇ ಬಳಸಿ. ಸಂಪೂರ್ಣ ಆಂಗ್ಲದಲ್ಲಿಯೇ ಮಾತನಾಡಿ, ವ್ಯವಹರಿಸಿ. ಸುಮ್ಮನೇ ಸವಿಗನ್ನಡವನ್ನು ಹಾಳುಗನ್ನಡವನ್ನೇಕೆ ಮಾಡುತ್ತೀರಿ?

ನಾನು ಕೇವಲ ಆಂಗ್ಲ ಮಾಧ್ಯಮದಲ್ಲಿ ಕಲಿತವರ ಬಗ್ಗೆ ಹೇಳುತ್ತಿಲ್ಲ. (ನಾನು ಅಂಗ್ಲ ಮಾಧ್ಯಮದಲ್ಲಿ ಕಲಿತವನೇ). ದುರದೃಷ್ಟದ ಸಂಗತಿಯೇನೆಂದರೆ, ಕನ್ನಡ ಮಾಧ್ಯಮದಲ್ಲಿ ಕಲಿತ ಹಲವರೂ ಈ “ಕಂಗ್ಲಿಷ್” ಬಳಸುತ್ತಿರುವುದು. ಇನ್ನೂ ದುರದೃಷ್ಟದ ಸಂಗತಿಯೇನೆಂದರೆ, ಇವರು ತಮ್ಮ ಮಕ್ಕಳೊಡನೆಯೂ ಕಂಗ್ಲಿಷ್ ನಲ್ಲಿಯೇ ಮಾತನಾಡುತ್ತಾರೆ. ಹಲವು ಮಕ್ಕಳಿಗೆ, “ಸೇಬು ಹಣ್ಣು” ಎಂದರೆ ತಿಳಿಯದು. ಅವ್ರಿಗೆ “apple”  ಎಂದಾಗಲೇ ಗೋಚಾರವಾಗುವುದು. (ಇವುಗಳಿಗೆ ಅಪ್ಪ, ಅಮ್ಮ ಇರುವುದಿಲ್ಲ. ಮಮ್ಮಿ, ಡ್ಯಾಡಿ ಮಾತ್ರ.).. “ಮಾವು”, “ಹಲಸು”, “ಅನಾನಾಸು”, “ಬಾಳೆ”…., “ಈ ಮನುಷ್ಯ ಏನ್ ಹೇಳ್ತಿದ್ದಾನಪ್ಪಾ! ಯಾವೂರಿನಿಂದ ಬಂದನಪ್ಪಾ!”, ಎಂದು ಅಂತಹ ಮಕ್ಕಳು ಆಶ್ಚರ್ಯಪಟ್ಟ್ರೆ, ಅದರಲ್ಲಿ ಆಶ್ಚರ್ಯವೇನಿಲ್ಲ! ಏಕೆಂದರೆ, ಅವುಗಳ ಪೂಜ್ಯ ಮಾತಾಪಿತರು, “ನೋಡು ಪುಟ್ಟಾ! ಅದು “ಮ್ಯಾಂಗೋ”(mango)”, “ಅಲ್ನೋಡ್ ಪುಟ್ಟೀ, “ಜ್ಯಾಕ್ಫ್ರೂಟ್!” (jackfruit), “ಮರೀ! ಅದು ಪೈನ್ಯಾಪಲ್ (pineapple)”, “ಮುದ್ದೂ, “ಬನಾನಾ” (banana) ತಿನ್ನು”…. ಅಂದೆಲ್ಲಾ ಹೇಳಿಕೊಟ್ಟಿರುತ್ತಾರೆ.. ತಾವೂ ಕನ್ನಡ ಕೊಂದು, ಕನ್ನಡದ ಭವಿಷ್ಯವನ್ನೂ ಕೊಲ್ಲುತ್ತಿದ್ದಾರೆ.. ಇದು ನಿಮ್ಮ ಮನೆಯಲ್ಲಿಯೇ ಎಷ್ಟರ ಮಟ್ಟಿಗೆ ನಡೆಯುತ್ತಲಿದೆಯೆಂದು ಒಮ್ಮೆ ಕಣ್ತೆರೆದು ನೀವೇ ಗಮನಿಸಿ.

ಮಗು ತನ್ನ ಮಾತೃಭಾಷೆ ಕಲಿಯುವುದು ಮನೆಯಲ್ಲಿ. ಬೇರೆ ಭಾಷೆ, ಶಾಲೆಯಲ್ಲಿ, ಪ್ರಪಂಚದಲ್ಲಿ. ಕನ್ನಡದ ಕಗ್ಗೊಲೆಯಾಗುತ್ತಿರುವುದು ಶಾಲೆಯಲ್ಲಲ್ಲ, ಕನ್ನಡ ನಾಡಿನಲ್ಲಲ್ಲ. ಕನ್ನಡಿಗರ ಮನೆ ಮನೆಯಲ್ಲಿ, ಮುಗ್ಧ ಬಾಲ ಕನ್ನಡಿಗರ ಮನದಲ್ಲಿ…

ಸರಕಾರವು ಕನ್ನಡವನ್ನು ಶಾಲೆಯಲ್ಲಲ್ಲ, ಕನ್ನಡ ಉಳಿಸಬೇಕಾಗಿದ್ರೆ ಮನೆ ಮನೆಯಲ್ಲಿ ಕಡ್ಡಾಯ ಮಾಡಬೇಕಾದ ಪರಿಸ್ಥಿತಿ ಇಂದಿದೆ.

ನಮ್ಮ ಕಂಗ್ಲೀಷ್ ಮಿತ್ರರಿಗೆ “ಈಗಾದರೂ ಎಚ್ಚೆತ್ತುಕೊಳ್ಳಿ, ಕನ್ನಡ ಉಳಿಸಿ, ಕನ್ನಡಾಂಬೆಯನ್ನು ಕಾಪಾಡಿ” ಎಂದೆಲ್ಲ ನಾನು ಹೇಳಲು ಹೋಗಿಲ್ಲ, ಹೋಗುವುದೂ ಇಲ್ಲ. ಏಕೆಂದರೆ, ಮೂರ್ಖರನ್ನು ತಿದ್ದುವುದು ಅಸಾಧ್ಯವೆಂದು ಸರ್ವಜ್ಞನು ಎಂದೋ ಹೇಳಿದ್ದಾನೆ.
ಹೇಳುವುದು ಇಷ್ಟೇ, ಎರಡೇ ಮಾತು:
೧::ಕನ್ನಡ ಬೇಕೆಂದರೆ, ಕನ್ನಡದಲ್ಲಿಯೇ ಮಾತನಾಡಿ. (ಶುಧ್ದ, ಪರಿಶುಧ್ದ ಕನ್ನಡವಲ್ಲ ಸ್ವಾಮಿ! ಸರಳ, ಸಾಮಾನ್ಯ ಕನ್ನಡವಾಗಿದ್ದರೂ ಧಾರಾಳವಾಗಿ ಸಾಕು!) ಕಂಗ್ಲಿಶ್ ಬಿಸಾಕಿ.
೨:: ಇಲ್ಲವಾದರೆ, ನಿಮಗೆ ಅಂಗ್ಲ ವ್ಯಾಮೋಹವೇ ಜಾಸ್ತಿಯೆಂದರೆ, ಕನ್ನಡ (ನಿಮ್ಮದ್ಯಾವ ಕನ್ನಡ ಸ್ವಾಮೀ, ಅದು “ಕಂಗ್ಲಿಷು”) ಬಿಟ್ಟುಹಾಕಿ! ನಿಮ್ಮ ಹಾಳುಗನ್ನಡ ನಿಲ್ಲಿಸಿ! ಆಂಗ್ಲದಲ್ಲಿಯೇ ಸಂಪೂರ್ಣವಾಗಿ ಮಾತನ್ನಾಡಿ.
ಯಾವುದೇ ಕೋರಿಕೆಯಿಲ್ಲ, ಒತ್ತಾಯವಿಲ್ಲ. ಎರಡು ಆಯ್ಕೆಗಳು(options) ನಿಮ್ಮ ಮುಂದೆ ಇದೆ. ನಿಮಗೆ ಸೂಕ್ತವೆನಿಸಿದ ಆಯ್ಕೆ ನೀವೇ ಮಾಡಿಕೊಳ್ಳಿ.
ಏಕೆಂದ್ರೆ, ಚಂದದ, ಸೊಬಗಿನ ಯಾವುದನ್ನೂ ಅರೆಜೀವ ಮಾಡಿ, ವಿಕಾರಗೊಳಿಸಿ, ಹೇಸಿಗೆಗೋಳಿಸಿ ಬದುಕುಳಿಸುವುದಕ್ಕಿಂತ, ಅದನ್ನು ಕೊಲ್ಲುವುದೇ ಮೇಲು.. ಅಲ್ಲವೇ..

»ಪ್ರದೀಪ್ ಹೆಗಡೆ

©Copyright Pradeep Features.

5 thoughts on “» ಕನ್ನಡದ ಬೆಳವಣಿಗೆ!

  1. ನನಗೆ ನಿಮ್ಮ ಈ ಕನ್ನಡದ ಮೇಲಿರುವ ಅಭಿಮಾನ ಪ್ರೀತಿ ನನಗೆ ಇಷ್ಟ ಆಯಿತು……..
    ನೀವ್ ಹೇಳಿರುವ ಹಾಗೆ ನಮ್ಮ ಜನ ಎಲ್ಲರು ಕನ್ನಡದಲ್ಲಿ ಮಾತನಾಡಿದರೆ ಎಷ್ಟು ಚೆನ್ನ !!

    Like

ನಿಮ್ಮದೊಂದು ಅನಿಸಿಕೆ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.