Posted by: prakavi on: June 17, 2009
ಈ ಬ್ಲಾಗಿನಲ್ಲಿ ಪ್ರಕಾಷಿಸಿದ ಮೊದಲ ಕವನ ಮುಂಜಾನೆ ನೋಟ, ೨೦೦೮ರಲ್ಲಿ ಗೀಚಿದ್ದು, ಚೆನ್ನಾಗಿ ಮೂಡಿ ಬಂದಿಲ್ಲವೆಂದು ಕೇಳಿಬಂತು (ನನಗೂ ಹಾಗನಿಸಿತು!). ಅದನ್ನೇ ಚೂರು ಬೇರೆ ವಿಧದಲ್ಲಿ ಹೇಳುವ ಪ್ರಯತ್ನ ಕೆಳಗಿದೆ…
ಮೂಟೆಯಂತಹ ಚೀಲ
ಬಾಗಿದ ಬೆನ್ನ ಮೇಲೆ
ಹೊತ್ತು ಮೆಲ್ಲನೆ ಹೊರಟ
ಪುಟ್ಟ ಹೆಜ್ಜೆಗಳನಾಲಿಸಲು
ಇಣುಕಿರುವ ನೇಸರನ
ಎಳೆ ಕಿರಣಗಳಲಿ ಕಂಗೊಳಿಸುವ
ಚಿಲಿಪಿಲಿ ಹಕ್ಕಿಗಳ ಇಂಪು
ತುಂಬಿದ ಸುಂದರ ಮುಂಜಾನೆಯ
ಸೊಬಗ ಗಮನಿಸದೇ ಸಾಗಿವೆ
ಚಿಂತಾಭರಿತ ಪುಟ್ಟ ಕಣ್ಣುಗಳು..
ಪ್ರकवि(Prakavi)
©2009 Pradeep Features. All rights reserved.
ಕೆಲವರು ಹೇಳಿದ್ರು ಸಾರ್.. ಮತ್ತೆ ನನಗೂ ಹಾಗೇ ಅನಿಸಿತ್ತು. ಏಕೆಂದ್ರಎ, ಅವಸರದಲ್ಲಿ ಏನೋ ಗೀಚಿ ಪೊಸ್ಟ್ ಮಾಡಿದ್ದೆ. ಪುನಹ ನೋಡಿ ಸ್ವಲ್ಪ ಬದಲಾಯಿಸೋಣ ಅನ್ನಿಸಿತು.. ನಿಮಗೆ ಮೆಚ್ಚುಗೆಯಾದುದು ಸಂತೋಷ..
June 17, 2009 at 2:45 pm
ಕವನ ಚೆನ್ನಾಗೇ ಇದೆಯಲ್ಲಾ….ಯಾರು ಹೇಳಿದ್ದು ಚೆನ್ನಾಗಿಲ್ಲವೆಂದು…