ಮನುಜಾಯಣ
ಹೆಸರಲ್ಲೇನಿದೆ?
ವಿಶಾಲ ಬ್ರಹ್ಮಾಂಡದನಂತ ದಿಕ್ಕುಗಳೊಳ
ನಭೋಮಂಡಲದ ಹೊದಿಕೆಯುಳ್ಳ
ಭೂಮಂಡಲದ ಮೈ ಮೇಲ್ಗಡೆ ಚಲಿಸುವ
ವಾನರ ಬಾಂಧವರ ಮೆದುಳುಳ್ಳ ಬುದ್ಧಿಗೇಡಿಯ
ಗುರುತು ಹಿಡಿಯಲಿಹುದು ಹೆಸರು..
ವಿಳಾಸದಲ್ಲೇನಿದೆ?
ಸೀಳಿ ಭೂಗರ್ಭವ, ಹಿಚುಕಿ ಭುವಿಯುಸಿರ
ಕಡಿದು ತನ್ನುಸಿರ ತಾನೇ
ಮೆರೆದು ಹಾಹಾಕಾರದಿ ಜಗದೊಡೆಯನಂತೆ
ಬೀಗುವ ಮೆದುಳುಳ್ಳ ಮೂರ್ಖನ
ವಾಸಸ್ಥಾನಕೆ ಕೈಪಿಡಿ ವಿಳಾಸ..
ನಿನ್ನಲ್ಲೇನಿದೆ?
ರವಿಯ ಸಂಘದ ಸದಸ್ಯರ ಸುತರಲಿ
ಶ್ರೇಷ್ಟನಾಗಿ ಹತ್ಯೆಯೆಸಗಿ ಆತ್ಮಸಾಕ್ಷಿಯ
ಶೋಷಿಸಿ ಅನ್ಯ ಭೂಸುತರ
ಮೆರೆವ ಮೆದುಳುಳ್ಳ ಮುಠ್ಠಾಳನೆಂಬ
ಸ್ವಾರ್ಥದಿ ಕೊಬ್ಬಿದ ಅವಿದ್ಯಾವಂತ ಅಕ್ಷರಸ್ಥ…
ವಿಶಾಲ ಬ್ರಹ್ಮಾಂಡದನಂತ ದಿಕ್ಕುಗಳೊಳ
ನಭೋಮಂಡಲದ ಹೊದಿಕೆಯುಳ್ಳ
ಭೂಮಂಡಲದ ಮೈ ಮೇಲ್ಗಡೆ ಚಲಿಸುವ
ವಾನರ ಬಾಂಧವರ ಮೆದುಳುಳ್ಳ ಬುದ್ಧಿಗೇಡಿಯ
ಗುರುತು ಹಿಡಿಯಲಿಹುದು ಹೆಸರು..
ವಿಳಾಸದಲ್ಲೇನಿದೆ?
ಸೀಳಿ ಭೂಗರ್ಭವ, ಹಿಚುಕಿ ಭುವಿಯುಸಿರ
ಕಡಿದು ತನ್ನುಸಿರ ತಾನೇ
ಮೆರೆದು ಹಾಹಾಕಾರದಿ ಜಗದೊಡೆಯನಂತೆ
ಬೀಗುವ ಮೆದುಳುಳ್ಳ ಮೂರ್ಖನ
ವಾಸಸ್ಥಾನಕೆ ಕೈಪಿಡಿ ವಿಳಾಸ..
ನಿನ್ನಲ್ಲೇನಿದೆ?
ರವಿಯ ಸಂಘದ ಸದಸ್ಯರ ಸುತರಲಿ
ಶ್ರೇಷ್ಟನಾಗಿ ಹತ್ಯೆಯೆಸಗಿ ಆತ್ಮಸಾಕ್ಷಿಯ
ಶೋಷಿಸಿ ಅನ್ಯ ಭೂಸುತರ
ಮೆರೆವ ಮೆದುಳುಳ್ಳ ಮುಠ್ಠಾಳನೆಂಬ
ಸ್ವಾರ್ಥದಿ ಕೊಬ್ಬಿದ ಅವಿದ್ಯಾವಂತ ಅಕ್ಷರಸ್ಥ…
ಈ ಕವನದ ಎರಡನೆಯ ಭಾಗ, ಮನುಜಾಯಣ ಭಾಗ-೨ ನೋಡಲು ಇಲ್ಲಿ ಕ್ಲಿಕ್ಕಿಸಿರಿ
ಪ್ರಕವಿ(Prakavi)
©2009 Pradeep Features. All rights reserved.
Posted on January 9, 2009, in ಕನ್ನಡ, ಕವನ, ಕ್ರಾಂತಿ, ಮನುಜಾಯಣ, Kannada Poems, kavana and tagged 2009, ಇಂದಿನ ಮನುಜ, ಕಟು ವಾಸ್ತವ, ಕನ್ನಡ, ಕನ್ನಡ ಕವನ, ಕವನ, ಕ್ರಾಂತಿ, ನಿನ್ನಲ್ಲೇನಿದೆ?, ಮನುಜ, ಮನುಜಾಯಣ, ವಾಸ್ತವ, ವಿಳಾಸದಲ್ಲೇನಿದೆ?, ಹೆಸರಲ್ಲೇನಿದೆ?, ೨೦೦೯, kannada, kannada kavana, Kannada Poems, kranti. Bookmark the permalink. 7 Comments.




ಪ್ರಕವಿ….
ಕವನ ಸಕ್ಕತ್ತಾಗಿದೆ….ನಿಮ್ಮ ಅಭಿಪ್ರಾಯ ಸರಿಯೆನಿಸುತ್ತೆ……
ಮನುಷ್ಯನ ಫುಲ್ ಅಡ್ರಸ್ಸನ್ನೇ ಹೇಳಿ ಬಿಟ್ರಲ್ರೀ ನೀವು.
ಶಿವು ಅವರೇ! ಇದು ಕೇವಲ ಅಭಿಪ್ರಾಯವಲ್ಲ ಕಣ್ರೀ! ಇಂದಿನ ಮನುಜರ “ಯಶೋಗಾಥೆ!”

—
ಪ್ರಮೋದರೇ, ಪೂರ ಮುಗಿದಿಲ್ಲ! ಹೇಳಲಿನ್ನೂ ಇದೆ!
—
pradeep,
Poorti mugsappaaaaaaa… adyaake ardharda tagombarteeya?
ಈ ಕವನ ಪೂರ್ತಿಯೇ ಇದೆ ಕಣ್ರೀ ಮಹೇಶ್! ಮನುಷ್ಯನ ಪೂರ್ತಿ ಕಥೆ ಇಷ್ಟೇ ಅಲ್ಲ ಎಂಬರ್ಥದಿಂದ ಹಾಗೆ ಹೇಳಿದ್ದೆ, ಅಷ್ಟೇ…
ಪ್ರದೀಪ್,
ಹೊಸ ಕವನವನ್ನು ಬ್ಲಾಗಿಗೆ ಹಾಕಿದ್ದೇನೆ…..ನೋಡಿ…..ನಿಮಗೆ ಹೇಗನ್ನಿಸುತ್ತದೆ ಪ್ರತಿಕ್ರಿಯಿಸಿ…..ಕವನದ ವಿಚಾರದಲ್ಲಿ ನಾನು ಹೊಸಬ….ನಿಮ್ಮ ಪ್ರತಿಕ್ರಿಯೆ ನನ್ನ ಮುಂದಿನ ಬರವಣಿಗೆಗೆ ಸ್ಪೂರ್ತಿ,….
http://chaayakannadi.blogspot.com/
ಪ್ರೀತಿಯಿರಲಿ….
ಶಿವು….
ಚೆನ್ನಾಗಿದೆ ಸಾರ್! ಮುಂದುವರೆಯಲಿ ನಿಮ್ಮ ಕವನ ಪಯಣ!! ;-D